ಹುಬ್ಬಳ್ಳಿ: ಗುರಾಯಿಸಿ ನೋಡುತ್ತಿಯಾ ಎಂದು ನೆಪ ಮಾಡಿಕೊಂಡು ಐದು ಜನ ಸೇರಿ ಓರ್ವನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಫ್ತಾಬ್ ಪಠಾಣ, ಮಲ್ಲಿಕ ಪಠಾಣ, ಸೋನು ಪಠಾಣ, ಸಾಧಿಕ ಕಿತ್ತೂರ, ಉಜೈಫ್ ಸೌಧಾಗರ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಮಾ. ೧೧ರಂದು ರಾತ್ರಿ ೧೦.೪೫ರ ವೇಳೆಗೆ ಸಿಬಿಟಿ ಮಸೀದಿಯಲ್ಲಿ ನಮಾಜ ಮಾಡಿ ಹೊರಗೆ ಕುಳಿತ ಇಕ್ಬಲಾ ಸಿತಾರವಾಲೆ(೪೧) ಎಂಬಾತನೊಂದಿಗೆ ತಂಟೆ ತಗೆದು, ಹಳೇ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ ಎಂಬ ಕಾರಣಕ್ಕೆ ಹಲ್ಲೆ ಮಾಡಿ ಚಾಕುವಿನಿಂದ ಇರಿದ್ದಾರೆ. ಗಾಯಾಳುವನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದರು. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದರು.