Home ತಾಜಾ ಸುದ್ದಿ ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ

ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ

0

ಹೊಸದಿಲ್ಲಿ: ʼಚಿಟ್ಟಿ ಆಯಿ ಹೈʼ, ʼಚಾಂದ್‌ ಜೈಸಾ ರಂಗ್‌ʼ ನಂತಹ ಗಝಲ್‌ಗಳನ್ನು ಹಾಡಿ ಖ್ಯಾತಿ ಪಡೆದಿದ್ದ ಖ್ಯಾತ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಪಂಕಜ್‌ ಉಧಾಸ್‌ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಪಂಕಜ್‌ ಅವರ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಅವರ ನಿಧನದ ಮಾಹಿತಿಯನ್ನು ಹಂಚಿಕೊಂಡಿದ್ದು, ʼದೀರ್ಘಕಾಲದ ಅನಾರೋಗ್ಯದಿಂದ ಫೆ. 26ರಂದು ಪಂಕಜ್‌ ಉಧಾಸ್‌ ಅವರು ನಿಧನರಾದರು. ಅವರ ನಿಧನದ ಬಗ್ಗೆ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆʼ ಎಂದು ಬರೆದುಕೊಂಡಿದ್ದಾರೆ.
1980ರ ದಶಕದಲ್ಲಿ ಪಂಕಜ್​ ಉಧಾಸ್​ ಅವರು ಗಝಲ್​ ಗಾಯನದ ಮೂಲಕ ಫೇಮಸ್​ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟ ಅವರು. ಹಿಂದಿ ಸಿನಿಮಾ ಹಾಗೂ ಭಾರತೀಯ ಪಾಪ್‌ ಸಂಗೀತಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್​ ಅಭಿನಯದ ‘ಸ್ಪರ್ಶ’ ಸಿನಿಮಾದ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡುಗಳು ಪಂಕಜ್​ ಉಧಾಸ್​ ಅವರ ಕಂಠದಲ್ಲಿ ಮೂಡಿಬಂದಿದ್ದವು.

pankaj udhas ghazals and songs..... chithi aai he...thodi thodi piya karo

Exit mobile version