Home ತಾಜಾ ಸುದ್ದಿ ಖರ್ಗೆ ಹೇಳಿಕೆ ಸರಿ ಇದೆ, ಸರ್ಕಾರದಲ್ಲಿ ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ

ಖರ್ಗೆ ಹೇಳಿಕೆ ಸರಿ ಇದೆ, ಸರ್ಕಾರದಲ್ಲಿ ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ

0

ಹುಬ್ಬಳ್ಳಿ: ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ‌ ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವರು ೨೦೨೯ರ ಬಜೆಟ್ ಮುಖ್ಯಮಂತ್ರಿಗಳ ಮಗ ಮಂಡಿಸುತ್ತಾರೆ ಎಂದು ಹೇಳುತ್ತಾರೆ. ಖರ್ಗೆ ಅವರು ಈ ಹಿಂದೆಯು ಸಿಎಂ, ಡಿಸಿಎಂ ಅವರ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದರು. ಆದರೆ ಯಾವುದು ಸರಿಯಾಗಿಲ್ಲ ಎಂದರು.
ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ನಡೆದಿರುವುದು ಸರ್ಕಾರದ ವೈಪಲ್ಯ, ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಪೊಲೀಸರು ತಾವು ಕೊಟ್ಟ ಬಂದು ಹಣ ಗಳಸುವುದರಲ್ಲಿ ಗಮನ ಹರಿಸುತ್ತಿದ್ದಾರೆ.
ಮುಖ್ಯಮಂತ್ರಿಗಳು ಖಂಡಿಸುವುದಲ್ಲ, ಬದಲಾಗಿ ಅಲ್ಲಿನ ಅಧಿಕಾರಿಗಳು, ಪೊಲೀಸರು ಏನು ವ್ಯವಸ್ಥೆ ಮಾಡಿದ್ದರು ಎಂಬುದು ಚರ್ಚಿಸಿ ಅವರ ಮೇಲೆ ಕ್ರಮ ಆಗಬೇಕು. ಹುಬ್ಬಳ್ಳಿಯಲ್ಲಿ ಇಬ್ಬರು ಕಾನ್ಸಟೇಬಲ್ ಅಮಾನತ್ತು ಮಾಡಿದಂತೆ ಮಾಡಬಾರದು ಎಂದರು.
ಅಂಗನವಾಡಿ ಆಹಾರ ಪ್ರಕರಣವನ್ನು ಪೊಲೀಸರ ವೈಪಲ್ಯ ಇಲ್ಲಿ ಒಪ್ಪಿಕೊಳ್ಳುತ್ತಾರೆ ಅಂದರೆ ಏನರ್ಥ. ಯಾರ ಒತ್ತಡದಿಂದ ಪ್ರಮುಖ ಆರೋಪಿಗಳನ್ನು ಬಂದಿಸುತ್ತಿಲ್ಲ. ವಿಡಿಯೋ ಮಾಡಿ ಧಮಕಿ ಹಾಕುತ್ತಿದ್ದಾರೆ ಅಂದರೆ ಇದರಲ್ಲಿ ಬಹಳ ಜನರ ಕೈವಾಡವಿದೆ. ಪೊಲೀಸ ಕಮೀಷನರ್ ವೈಫಲ್ಯ ಎಂದು ಕಮೀಷನರ್ ಒಪ್ಪಿಕೊಳ್ಳುತ್ತಾರೆ ಎಂದರೆ ಅರ್ಥ ಏನು ಎಂದರು.

Exit mobile version