Home ತಾಜಾ ಸುದ್ದಿ ಕೋಟಿ ಬಾರಿ ಗೋವಿಂದನ ನಾಮ ಬರೆದ ಬೆಂಗಳೂರು ಬಾಲಕಿ

ಕೋಟಿ ಬಾರಿ ಗೋವಿಂದನ ನಾಮ ಬರೆದ ಬೆಂಗಳೂರು ಬಾಲಕಿ

0

ಬೆಂಗಳೂರು: ಗೋವಿಂದನ ನಾಮವನ್ನು ಕೋಟಿ ಬಾರಿ ತನ್ನ ಕೈಬರಹದಿಂದ ಬರೆದು ತಿಮ್ಮಪ್ಪನ ಆರ್ಶಿವಾದ ಪಡೆದಿದ್ದಾಳೆ.
ಬೆಂಗಳೂರ ಮೂಲದ 17 ರ ಬಾಲಕಿ ಕೀರ್ತನಾ ಎಂಬುವವರು ಈ ಸಾಧನೆ ಮಾಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಅಧೀಕೃತ ಖಾತೆ ಮೂಲಕ ವಿಷಯ ಹಂಚಿಕೊಂಡಿದೆ. ಟಿಟಿಡಿ ಅಧಿಕಾರಿಗಳು ಮಂಗಳವಾರ ಅತ್ಯಂತ ಹತ್ತಿರದಿಂದ ಇಷ್ಟ ದೈವ ದರ್ಶನದ ಭಾಗ್ಯ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಾಲಕಿ ಈ ಗೋವಿಂದ ಕೋಟಿಯನ್ನು ಅತಿ ಕಡಿಮೆ ಸಮಯದಲ್ಲಿ ಬರೆದಿದ್ದಾಳೆ ಎಂದಿದ್ದಾರೆ.

Exit mobile version