Home ನಮ್ಮ ಜಿಲ್ಲೆ ಕೆಫೆ ಸ್ಫೋಟ ಶಂಕಿತನಿಗಾಗಿ ಬಳ್ಳಾರಿಯಲ್ಲಿ ಎನ್‌ಐಎ ಹುಡುಕಾಟ

ಕೆಫೆ ಸ್ಫೋಟ ಶಂಕಿತನಿಗಾಗಿ ಬಳ್ಳಾರಿಯಲ್ಲಿ ಎನ್‌ಐಎ ಹುಡುಕಾಟ

0

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬದಿಸಿದಂತೆ ಬಳ್ಳಾರಿಗೆ ಬಂದಿರುವ ಎನ್ಐಎ ತಂಡ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಮಾಹಿತಿ ಪಡೆದಿದೆ.
ಎನ್ಐಎ ತಂಡಕ್ಕೆ ಬಳ್ಳಾರಿ ಮತ್ತು ತುಮಕೂರು ಪೊಲೀಸರ ಸಾಥ್ ನೀಡಿದ್ದು ಆರೋಪಿ ಘಟನೆ ನಡೆದ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದನಂತೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ ಗೋಕರ್ಣ ಬಸ್ ಮೂಲಕ ಭಟ್ಕಳಗೆ ತೆರಳಿದ್ದಾನೆ..
ಹೀಗಾಗಿ ಬಳ್ಳಾರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿವೆ, ಬೆಂಗಳೂರಿಂದ ಎರಡು ಕಾರುಗಳಲ್ಲಿ ಬಂದಿರುವ ಹತ್ತುಕ್ಕೂ ಹೆಚ್ಚು ಅಧಿಕಾರಿಗಳು. ಬಳ್ಳಾರಿಯಿಂದಲೇ ಬೇರೆಡೆ ತೆರಳಿದ ಹಿನ್ನಲೆ ಬಳ್ಳಾರಿ ನಿಲ್ದಾಣದಲ್ಲಿ ಮಾಹಿತಿ ಪಡೆಯಲಾಗಿದೆ

Exit mobile version