ರಾಯಚೂರು:ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ(ಕೆಆರ್‌ಐಡಿಎಲ್)ನ
ಸೇವೆಯಿಂದ ಅನಿಲ್ ಕುಮಾರ ಅವರನ್ನು ವಜಾಗೊಳಿಸಿದ ಕೆಆರ್‌ಐಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಅವರು ಅವರು ಆದೇಶ ಹೊರಡಿಸಿದ್ದಾರೆ.
ಕೆಆರ್‌ಐಡಿಎಲ್‌ನ ಕಾರ್ಯನಿರ್ವಾಹಕ ಎಂಜನಿಯರ್ ಪ್ರಭಾರ ಆಗಿದ್ದ ಅನಿಲ್ ಕುಮಾರ ಅವರ ವಿರುದ್ಧ ಕಳಪೆ ಕಾಮಗಾರಿ ನಿರ್ವಹಣೆ, ಜಲಸಂಪನ್ಮೂಲ ಇಲಾಖೆಯಿಂದ ಸಿಸಿ ರಸ್ತೆ ಕಾಮಗಾರಿ
ನಿರ್ವಹಣೆ ಹಣ ಬಿಡುಗಡೆಗೊಳಿಸಿದರೂ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡಿರುವ
ಆರೋಪದಿಡಿ ಕೆಆರ್‌ಐಡಿಎಲ್ ಸಂಸ್ಥೆಯ ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ ಗೋಖಲೆ
ಅವರು ಸುಳ್ಳು ಲೆಕ್ಕ ಪತ್ರಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಮಗಾರಿಗೆ
ಸಂಬಂಧಿಸಿದಂತೆ 69.31 ಲಕ್ಷ ರೂಗಳ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಅವರ ವಿರುದ್ಧ
ಪ್ರಕರಣ ದಾಖಲಿಸಲು ಆದೇಶದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.