Home ಅಪರಾಧ ಕುಡಿದ ಅಮಲಿನಲ್ಲಿ ಮಗುವನ್ನು ಎಸೆದು ಕೊಲೆ ಮಾಡಿದ ತಂದೆ

ಕುಡಿದ ಅಮಲಿನಲ್ಲಿ ಮಗುವನ್ನು ಎಸೆದು ಕೊಲೆ ಮಾಡಿದ ತಂದೆ

0

ಧಾರವಾಡ: ತಂದೆಯೇ ಕುಡಿದ ನಶೆಯಲ್ಲಿ ಮಗುವನ್ನು ಎತ್ತಿ ಬೀಸಾಡಿದ ಪರಿಣಾಮ ಒಂದು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಘಟನೆ ಇಲ್ಲಿನ ಕಿಮ್ಸ್ ನಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಂಭುಲಿಂಗಯ್ಯ ಶಾಪೂರಮಠ ಎಂಬಾತ ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೇಯಾ ಮೃತ ದುರ್ದೈವಿ ಮಗುವಾಗಿದ್ದು, ಗಾಯಗೊಂಡ ಮಗುವನ್ನು ಇಲ್ಲಿನ ಕಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

Exit mobile version