ಇಂದು ರಾಜ್ಯಾದ್ಯಂತ ನಾಗಪಂಚಮಿ ಸಂಭ್ರಮ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ ಮನೆ ಮಾಡಿದ್ದು,ಸಾವಿರಾರು ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯದೇವಸ್ಥಾನಕ್ಕೆ ಆಗಮಿಸಿ ನಾಗಮಂಟಪದಲ್ಲಿ ದೇವರಿಗೆ ಅಭಿಷೇಕ ಸಲ್ಲಿಸಿರುವರು
ದೇವಳದ ನಾಗಪ್ರತಿಷ್ಠೆ ಮಂಟಪದ ನಾಗನಕಲ್ಲಿಗೆ ಭಕ್ತರು ತನು ಹಾಗೂ ಎಳನೀರು ಸಮರ್ಪಣೆ ಮಾಡಿದರು. ಊರು ಹಾಗೂ ಪರವೂರುಗಳಿಂದ ಭಕ್ತರು ಬಂದಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಭಕ್ತರಿಗೆ ಹಾಲು ಸಮರ್ಪಣೆಗೆ ಅವಕಾಶ ನೀಡಲಾಗಿತ್ತು. ಬೆಳಗಿನಿಂದಲೇ ಭಕ್ತರ ಉದ್ದ ಸರದಿ ಇತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳಿಂದ ತನು ಅರ್ಪಣೆಯಾಗಿತ್ತು. ದೇವಸ್ಥಾನದ ವತಿಯಿಂದ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡ ಲಾಗಿದೆ. ಶ್ರೀ ದೇವಳದ ನಾಗ ಪ್ರತಿಷ್ಠ ಮಂಟಪ ಅನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು.