Home News ಕಳವು ಪ್ರಕರಣ: ನೇಪಾಳ ಮೂಲದ ಇಬ್ಬರ ಬಂಧನ

ಕಳವು ಪ್ರಕರಣ: ನೇಪಾಳ ಮೂಲದ ಇಬ್ಬರ ಬಂಧನ

ಭಟ್ಕಳ: ಜುಲೈ ೧೮ರ ರಾತ್ರಿ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಮನೆಯಲ್ಲಿ ಯಾರೂ ಇಲ್ಲವಾಗಿರುವುದನ್ನು ತಿಳಿದುಕೊಂಡು ಮುಂಬಾಗಿಲು ಒಡೆದು ಒಳಹೊಕ್ಕಿ ಮನೆಯಲ್ಲಿದ್ದ ೨,೮೦,೦೦೦ ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕಣವನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದ ಮುರ್ಡೇಶ್ವರ ಠಾಣೆಯ ಪೊಲೀಸರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳಾದ ನೇಪಾಳ ಮೂಲದ ನರೇಶ ಯಾನೆ ನರೇಂದ್ರ ಅಂಗಬಹದ್ದೂರ್ ಠಾಕೂರ್ (೫೧), ಜನಕ ತಂದೆ ಜಯಬದ್ದೂರ್ ಭಂಡಾರಿ (೩೩) ಎನ್ನುವವರನ್ನು ಬಂಧಿಸಿ ಅವರಿಂದ ೧೦೦ ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳತನ
Exit mobile version