ಕೋಲಾರ: ಕಲ್ಲು ಕ್ರಷ್ ಮಾಡುವಾಗ ಬ್ಲಾಸ್ಟಿಂಗ್ ವೇಳೆ ಕಲ್ಲು ಬಿದ್ದು ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾದ ಘಟನೆ ನಡೆದಿದೆ.
ಜಿಲ್ಲೆಯ ಮಾಲೂರು ತಾಲ್ಲೂಕುನ ಟೇಕಲ್‌ನ ಮಾಕಾರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಆಂದ್ರ ಮೂಲದ ಕಾರ್ಮಿಕ ವೆಂಕಟೇಶ್ (೬೦) ಎನ್ನಲಾಗಿದ್ದು, ಹರೀಶ್ ಮತ್ತು ಈಶ್ಚರ್ ಎಂಬುವರಿಗೆ ಗಾಯಗಳಾಗಿವೆ, ಬ್ಲಾಸ್ಟಿಂಗ್ ತಯಾರಿ ವೇಳೆ ಕಲ್ಲು ಬಂಡೆ ಬಿದ್ದು ಅವಘಡ ಸಂಬವಿಸಿದೆ, ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬೇಟಿ ನೀಡಿದ್ದಾರೆ, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.