Home ಅಪರಾಧ ಕಲ್ಲಿನಿಂದ ಜಜ್ಜಿ ಅತ್ತಿಯನ್ನೇ ಕೊಲೆಗೈದ ಅಳಿಯ

ಕಲ್ಲಿನಿಂದ ಜಜ್ಜಿ ಅತ್ತಿಯನ್ನೇ ಕೊಲೆಗೈದ ಅಳಿಯ

0

ಕಲಘಟಗಿ: ಸ್ವಂತ ಮಗಳ ಗಂಡ ಅಳಿಯ ಹೆಣ್ಣುಕೊಟ್ಟ ಅತ್ತೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ತಾಲೂಕಿನ ಬೀಸರಳ್ಳಿ ಗ್ರಾಮದ ವಾಸವಾಗಿದ್ದ ಪ್ರಶಾಂತ ರುದ್ರಯ್ಯ ಕೋಟಿ ಅದೇ ಗ್ರಾಮದ ಮಂಜವ್ವ ಸಹದೇವಪ್ಪ ಇಂಗನಳ್ಳಿ(೪೦) ಎನ್ನುವ ಮಹಿಳೆಯ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದು, ಕುಡಿತ ಚಟಕ್ಕೆ ಬಿದ್ದಿದ್ದ ಎನ್ನಲಾಗಿದ್ದು, ದಿನ ರಾತ್ರಿ ಕುಡಿದು ಮಗಳಿಗೆ ತೊಂದರೆ ನೀಡುತ್ತಿದ್ದ, ಫೆ. ೨೩ರಂದು ರಾತ್ರಿ ೧೧ಘಂಟೆಯ ವೇಳೆಗೆ ತನ್ನ ಹೆಂಡಿತಿಯೊಂದಿಗೆ ಜಗಳ ಪ್ರಾರಭಿಸಿದಾಗ ಅದನ್ನು ತಡೆಯಲು ಬಂದ ಅತ್ತೆಯನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಪ್ರಶಾಂತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version