Home ತಾಜಾ ಸುದ್ದಿ ಸಿದ್ದರಾಮಯ್ಯ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕೋ ಕನ್ನರಾಮಯ್ಯ

ಸಿದ್ದರಾಮಯ್ಯ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕೋ ಕನ್ನರಾಮಯ್ಯ

0

ಹುಬ್ಬಳ್ಳಿ: ಸಿದ್ದರಾಮಯ್ಯ ಕನ್ನರಾಮಯ್ಯ ಆಗಿದ್ದಾರೆ. ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪಾಪದ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದೇವಸ್ಥಾನದ ಹಣವನ್ನು ಸರ್ಕಾರ ನಿಂತು ಲೂಟಿ ಹೊಡೆಯುತ್ತಿದೆ ಎಂದು ಅವರು ರಾಜ್ಯ ಸರ್ಕಾರ ಒಂದು ಲಕ್ಷ 90 ಸಾವಿರ ಕೋಟಿ ಸಾಲ ಮಾಡಿದೆ. ಸರ್ಕಾರ ಇವತ್ತು ಅಧೋಗತಿಗೆ ಹೋಗಿದೆ ಎಂದರು. ಇನ್ನು ಸಿದ್ದರಾಮಯ್ಯ ನೀವೂ ಕೂಡ ರಾಹುಲ್‌ ಗಾಂಧಿ ರೀತಿ ಆಗಬೇಡಿ ಜನ ನಿಮ್ಮನ್ನು ಇಲ್ಲಿವರೆಗೆ ಪ್ರಬುದ್ಧ ರಾಜಕಾರಣಿ ಎಂದು ತಿಳಿದಿದ್ದಾರೆ ಎಂದರು.

Exit mobile version