Home ತಾಜಾ ಸುದ್ದಿ ಕಲಿಯುಗದ ಶಿಶುಪಾಲ ಯತ್ನಾಳ್: ಅದು ಪೇಪರ್ ಹುಲಿ, ಗ್ರೌಂಡ್‌ ಹುಲಿ ಅಲ್ಲ

ಕಲಿಯುಗದ ಶಿಶುಪಾಲ ಯತ್ನಾಳ್: ಅದು ಪೇಪರ್ ಹುಲಿ, ಗ್ರೌಂಡ್‌ ಹುಲಿ ಅಲ್ಲ

0

ಕಲಿಯುಗದ ಶಿಶುಪಾಲ ಯತ್ನಾಳ್: ಶಿಶುಪಾಲನಿಗೆ ಆದ ಶಿಕ್ಷೆಯನ್ನೇ ಜನರು ಯತ್ನಾಳ್‌ಗೆ ಕೊಡುತ್ತಾರೆ

ಬೆಂಗಳೂರು: ಯತ್ನಾಳ್ ಮಾಧ್ಯಮಗಳು ಸೃಷ್ಟಿದ ಹುಲಿ. ಗ್ರೌಂಡ್‌ನಲ್ಲಿ ಅದು ಹುಲಿ ಅಲ್ಲ ಇಲಿ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯ ಬಳಿ ಮಾತನಾಡಿದ ಅವರು, ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದನ್ನೆಲ್ಲ ನಂಬುವ ಅವಶ್ಯಕತೆಯಿಲ್ಲ, ತಮ್ಮನ್ನು ಉಚ್ಚಾಟಿಸಿದರೆ ಅನೇಕ ಬಿಜೆಪಿ ಮುಖಂಡರು ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಾರೆ ಎಂದು ಅವರು ಹೇಳಿದ್ದರು, ಆದರೆ ಕೇವಲ ಇಬ್ಬರು ಮಾತ್ರ ಇದುವರೆಗೆ ರಾಜೀನಾಮೆ ಸಲ್ಲಿಸಿರೋದು, ಯತ್ನಾಳ್ ಉಚ್ಚಾಟನೆಯಾದ ಮರುದಿನ ವಿಜಯಪುರದ ಗಾಂಧಿ ಚೌಕ್​​ನಲ್ಲಿ 40 ಜನ ಪ್ರತಿಭಟನೆಗೆ ಸೇರಿದ್ದರು, ಸಿದ್ದೇಶ್ವರ ಬ್ಯಾಂಕಲ್ಲಿದ್ದ ಜನರನ್ನು ಕರೆತಂದು ಪ್ರತಿಭಟನೆ ಮಾಡಿಸಲಾಯಿತು, ಇದೆಲ್ಲ ಮಾಧ್ಯಮಗಳ ಸೃಷ್ಟಿ. ಈಗ ಸ್ವತಃ ಯತ್ನಾಳ್ ಅವರೇ ನಾನು ಹುಲಿನಾ, ಇಲಿನಾ ಅಂತ ನೋಡಿಕೊಳ್ಳುತ್ತಿದ್ದಾರೆ, ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಹೊಸ ವರ್ಷ ಪ್ರಾರಂಭ ಆಗಿದೆ. ಹೊಸ ಯೋಜನೆ ಬಗ್ಗೆ ಮಾತಾಡೋಣ. ವಿಜಯೇಂದ್ರ ನೇತೃತ್ವದಲ್ಲಿ, ಹಿಂದುತ್ವದ ಆಧಾರದಲ್ಲಿ ಪಕ್ಷ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಸಂಕಲ್ಪ ಸಾಕಾರ ಮಾಡಲು ವಿಜಯೇಂದ್ರ ನೇತೃತ್ವದಲ್ಲಿ ಕೆಲಸ ಮಾಡೋಣ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದರು. ಮಹಾಭಾರತದಲ್ಲಿ ಶಿಶುಪಾಲ ಬರುತ್ತಾನೆ. ಶಿಶುಪಾಲ, ಶ್ರೀಕೃಷ್ಣನ ಬಗ್ಗೆ ಚುಚ್ಚಿ ಚುಚ್ಚಿ ಮಾತಾಡಿದ. ಅವನ ಅಂತ್ಯ ಹೇಗಾಯ್ತು. ಕಲಿಯುಗದ ಶಿಶುಪಾಲ ಯತ್ನಾಳ್. ಶಿಶುಪಾಲನಿಗೆ ಆದ ಶಿಕ್ಷೆಯನ್ನೇ ಜನರು ಯತ್ನಾಳ್‌ಗೆ ಕೊಡುತ್ತಾರೆ ಎಂದು ಕಿಡಿಕಾರಿದರು.

ಯತ್ನಾಳ್‌ಗೆ ಯಡಿಯೂರಪ್ಪ ಅವರು ರಾಜಕೀಯ ಪುನರ್ ಜನ್ಮ ಕೊಟ್ಟಿದ್ದಾರೆ: ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಯತ್ನಾಳ್ ಯಾರ ವಿರುದ್ಧ ಮಾತನಾಡಿಲ್ಲ ಹೇಳಿ. ವಾಜಪೇಯಿ, ಮೋದಿ, ಜೋಶಿ, ಜಗದೀಶ್ ಶೆಟ್ಟರ್ ಎಲ್ಲರ ಬಗ್ಗೆ ಮಾತಾಡಿದ್ದರು. ಯಡಿಯೂರಪ್ಪಗೆ ಈ ಯತ್ನಾಳ್ ಜೀವನ ಪರ್ಯಂತ ಋಣಿಯಾಗಿರಬೇಕು. 2018ರಲ್ಲಿ ಕರೆದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಪುಣ್ಯಾತ್ಮ ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ. ಶಿಶುಪಾಲನಿಗೆ ಆದ ರೀತಿಯೇ ಯತ್ನಾಳ್‌ಗೆ ರಾಜಕೀಯ ವಧೆ ಮಾಡುವ ಕೆಲಸ ಜನರು ಮಾಡುತ್ತಾರೆ ಎಂದರು.

Exit mobile version