Home ಅಪರಾಧ ಕಲಬುರಗಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಅಪಹರಣವಾಗಿದ್ದ ಶಿಶು ಪತ್ತೆ

ಕಲಬುರಗಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಅಪಹರಣವಾಗಿದ್ದ ಶಿಶು ಪತ್ತೆ

0

ಕಲಬುರಗಿ: ನಗರದ ಗುಲಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ಘಟಕದಿಂದ ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶು ಅಪಹರಿಸಿದ 36 ಗಂಟೆಯಲ್ಲಿ ಕಂದಮ್ಮ ತಾಯಿಯ ಮಡಿಲು ಸೇರಿದೆ.

ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಮಗುವನ್ನು ಆಸ್ಪತ್ರೆಯಿಂದ ಅಪಹರಣ ಮಾಡಲಾಗಿತ್ತು.

ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಈ ಕುರಿತು ನಾಲ್ಕು ವಿಶೇಷ ತನಿಖೆ ತಂಡ ರಚಿಸಲಾಗಿತ್ತು. ಪೊಲೀಸರು ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಮಗುವನ್ನು ಪತ್ತೆ ಮಾಡಿದ್ದಾರೆ.

ಬುಧವಾರ ನಸುಕಿನ ಜಾವ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಯವರಿಗೆ ಒಪ್ಪಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ನಾನಾ ಹಂತಗಳ ತನಿಖೆ ನಡೆಸಿ ಮಗುವನ್ನು ರಕ್ಷಣೆ ಮಾಡಿದೆ.

Exit mobile version