Home ಅಪರಾಧ ಕಲಬುರಗಿಯಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

ಕಲಬುರಗಿಯಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

0


ರೌಡಿಶೀಟರ್ ಖಲೀಲ್ ಅಹ್ಮದ್ ಕೊಲೆ ಆರೋಪಿ ಕಾಲಿಗೆ ಪೈರಿಂಗ್


ಕಲಬುರಗಿ: ಇತ್ತೀಚೆಗೆ ರೌಡಿಶೀಟರ್ ಖಲೀಲ್ ಅಹ್ಮದ್‌ನನ್ನು ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿ ಬಂಧಿತನಾಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ವಿಶ್ವವಿದ್ಯಾಲಯದ ಪೊಲೀಸರು ಫೈರಿಂಗ್ ಮಾಡಿದ ಘಟನೆ ಸೋಮವಾರ ನಡೆದಿದೆ.
ಕೌಸರ್ ಮಿರ್ಜಾ ಎಂಬಾತನ ಕಾಲಿಗೆ ಫೈರಿಂಗ್ ಮಾಡಲಾಗಿದೆ.
೧೧ ರಂದು ರೌಡಿಶೀಟರ್ ಖಲೀಲ್‌ನನ್ನ ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಕೌಸರ್ ಮಿರ್ಜಾನನ್ನು ಬಂಧಿಸಲು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಠಾಣೆಯ ಇನ್ಸಪೆಕ್ಟರ್ ಸುಶೀಲಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಪತ್ತೆ ಕಾರ್ಯಾಚರಣೆ ನಡೆಸಿ ಭಾನುವಾರ ಬಂಧಿಸಲಾಗಿತ್ತು. ಸೋಮವಾರ ಠಾಣೆಯಿಂದ ತಪ್ಪಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೋದಾಗ ಮೂರು ಜನ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಗ ಪ್ರಾಣ ರಕ್ಷಣೆಗಾಗಿ ಇನ್ಸಪೆಕ್ಟರ್ ಸುಶೀಲಕುಮಾರ್ ಕಲಬುರಗಿ ಹೊರವಲಯದ ಆಜಾದಪುರ ಬಳಿ ಫೈರಿಂಗ್ ಮಾಡಿದ್ದಾರೆ. ಸದ್ಯ ಆರೋಪಿ ಕೌಸರ್ ಮಿರ್ಜಾನನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version