Home ಅಪರಾಧ ಕಲಬುರಗಿಯಲ್ಲಿ ಬೆಳ್ಳಂ ಬೆಳಗ್ಗೆ ಮಹಿಳೆಯ ಬರ್ಬರ ಕೊಲೆ

ಕಲಬುರಗಿಯಲ್ಲಿ ಬೆಳ್ಳಂ ಬೆಳಗ್ಗೆ ಮಹಿಳೆಯ ಬರ್ಬರ ಕೊಲೆ

0

ಸಂ.ಕ.ಸಮಾಚಾರ ಕಲಬುರಗಿ : ಮಂಗಳವಾರ ಬೆಳ್ಳಂ ಬೆಳಗ್ಗೆ ಮಹಿಳೆಯೊಬ್ಬಳ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ಶಹಬಜಾರ್ ಬಡಾವಣೆಯಲ್ಲಿ ನಡೆದಿದೆ.
ಜಿಲ್ಲೆಯ ಕಲ್ಲಹಂಗರಗಾ ಗ್ರಾಮ ಮೂಲದ ಶಹಾಬಜಾರ್ ಬಡಾವಣೆ ನಿವಾಸಿ ರೂಪಾ (32) ಕೊಲೆಯಾದ ಮಹಿಳೆ. ಸಮೋಸ ಮಾಡಲು ಹೊಟೇಲ್‌ಗೆ ತೆರಳುವಾಗ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧದ ಹಿನ್ನಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಎಸಿಪಿ ಚಂದ್ರಶೇಖರ್ ಸೇರಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version