Home News ಕಲಬುರಗಿಯಲ್ಲಿ ನೆರವೇರಿದ ಬಿಎಸ್‌ವೈ ಮೊಮ್ಮಗನ ನಿಶ್ಚಿತಾರ್ಥ

ಕಲಬುರಗಿಯಲ್ಲಿ ನೆರವೇರಿದ ಬಿಎಸ್‌ವೈ ಮೊಮ್ಮಗನ ನಿಶ್ಚಿತಾರ್ಥ

ಕಲಬುರಗಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ, ಸಂಸದ ಬಿ.ವೈ.ರಾಘವೇಂದ್ರ-ತೇಜಸ್ವಿನಿ ಅವರ ಸುಪುತ್ರ ಸುಭಾಷ ಮತ್ತು ಕಲಬುರಗಿಯ ಶ್ರೀ ಶರಣಬಸವೇಶ್ವರರ ಸಂಸ್ಥಾನದ ಮತ್ತು ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ-ದೀಪಾಲಿ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ಸೋಮವಾರ ನಿಶ್ಚಿತಾರ್ಥ ನಡೆಯಿತು.
ಯಡಿಯೂರಪ್ಪ ಅವರು ಈಗಾಗಲೇ ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಲಬುರಗಿಯ ಉದ್ಯಮಿ ಶಿವಾನಂದ ಮಾನ್ಕರ್ ಅವರ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ ಮಾಡಿದ್ದರು. ಇದೀಗ ತಮ್ಮ ಮೊಮ್ಮಗ ಸುಭಾಷನಿಗೂ ಕಲಬುರಗಿಯಿಂದಲೇ ಸಂಬಂಧ ಹುಡುಕಿ ಗಮನ ಸೆಳೆದಿದ್ದಾರೆ.
ಬಿ.ಎಸ್. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅವರ ಕುಟುಂಬ, ಲಿಂಗರಾಜಪ್ಪ ಅವರ ಕುಟುಂಬದೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸಿಕೊಟ್ಟರು.

Exit mobile version