Home News ಕನ್ನಡ ವಿವಿ 33ನೇ ನುಡಿಹಬ್ಬ: ಮೂರು ಜನ ಗಣ್ಯರಿಗೆ ನಾಡೋಜ ಪದವಿ

ಕನ್ನಡ ವಿವಿ 33ನೇ ನುಡಿಹಬ್ಬ: ಮೂರು ಜನ ಗಣ್ಯರಿಗೆ ನಾಡೋಜ ಪದವಿ

ಯಕ್ಷಗಾನ ಕಲಾವಿದರು ಸೇರಿ 7 ಜನರಿಗೆ ಡಿ. ಲಿಟ್ ಪ್ರದಾನ

ವಿಜಯನಗರ : ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೂರು ಜನ ಗಣ್ಯರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ತಿಳಿಸಿದ್ದಾರೆ
ಹಂಪಿ ಕನ್ನಡ ವಿವಿಯ 33 ನೇ ನುಡಿಹಬ್ಬ ಏಪ್ರಿಲ್‌ 04ರಂದು ನಡೆಯಲಿದ್ದು, ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುವುದು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ವಿಜಯನಗರದ ಕೊಟ್ಟೂರಿನ ಸಾಹಿತಿಗಳಾದ ಕುಂ ವೀರಭದ್ರಪ್ಪ, ಧಾರವಾಡದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಗಾಯಕ ಪಂಡೀತ್ ವೆಂಕಟೇಶ ಕುಮಾರ್ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುವುದು.

ಘಟಿಕೋತ್ಸವದ ಭಾಷಣವನ್ನು ಸಸ್ಯಶಾಸ್ತ್ರಜ್ಞ ಪ್ರೊ.ಎ ರಾಜಾಸಾಬ್ ಮಾಡಲಿದ್ದು, ನಾನಾ ವಿಭಾಗದ 198 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಕ ಸಚಿವ ಡಾ. ಎಂ.ಸಿ. ಸುಧಾಕರ್ ಪಿಎಚ್‌ಡಿ ಪದವಿ ಪ್ರದಾನ ಮಾಡಲಿದ್ದಾರೆ, ಇಬ್ಬರು ಯಕ್ಷಗಾನ ಕಲಾವಿದರು ಸೇರಿ 7 ಜನರಿಗೆ ಡಿ. ಲಿಟ್ ಪ್ರದಾನ ಮಾಡಲಾಗುತ್ತಿದ್ದು. ಹಂಪಿ ಕನ್ನಡ ವಿವಿಯ 33 ನೇ ನುಡಿಹಬ್ಬಕ್ಕೆ ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರು ಭಾಗಿಯಾಗಲಿದ್ದಾರೆ.

Exit mobile version