Home ಅಪರಾಧ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ

ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ

0

ಕುಷ್ಟಗಿ: ಕಣ್ಣಿಗೆ ಖಾರದ ಪುಡಿ ಎರಚಿ ೫ ಲಕ್ಷ ರೂಪಾಯಿ ಹಣ ದರೋಡೆ ಮಾಡಿದ ಘಟನೆ ತಾಲೂಕಿನ ಕಿಲ್ಲಾರಹಟ್ಟಿ ಬಳಿ ಘಟನೆ ನಡೆದಿದೆ.
ಲಿಂಗಸೂರಿನಿಂದ ಕೊಪ್ಪಳದ ಕಡೆಗೆ ಹೊಗುವಾಗ ಕಿಲ್ಲಾರಹಟ್ಟಿ ಡಗ್ಗಿ ಬಳಿ ಖದೀಮರು ಕಾರು ಅಡ್ಡಗಟ್ಟಿದ್ದಾರೆ. ಬಳಿಕ ದರೋಡೆ ಮಾಡಿದ್ದಾರೆ. ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ನೆಪ ತೆಗೆದು ಮೊದಲಿಗೆ ಹಲ್ಲೆ ಮಾಡಿದ್ದಾರೆ. ಲಿಂಗಸೂರ ಮೂಲದ ಚಾಲಕ ಜಯಮಹಾಂತೇಶ ಮೇಲೆ ಮೊದಲು ಹಲ್ಲೆ ನಡೆಸಿ ಖಾರದ ಪುಡಿ ಎರಚಿದ್ದಾರೆ. ಬಳಿಕ ಖಾಲೀದ್,ಶಿವಾನಂದ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಾರೆ.ಕಾರು ಅಡ್ಡಗಟ್ಟಿ ಚಾಲಕ ಹಾಗೂ ಮಾಲೀಕರಿಂದ ಸುಮಾರು ರೂ5 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿದ್ದಾರೆ.ಖದೀಮರು ನಂಬ‌ರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದು ದರೋಡೆ ಮಾಡಿದ್ದಾರೆ.ಸದ್ಯ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಭೇಟಿ,ಸಿಪಿಐ‌ ಯಶವಂತ ಬಿಸನಳ್ಳಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶಿವಾನಂದ ಅವರಿಗೆ ಬಿಪಿ ಜಾಸ್ತಿ ಆಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆ ಗೆಂದು ದಾಖಲಿಸಲಾಗಿದೆ.

Exit mobile version