Home News ಕಡಿಮೆ ಅಂಕ: ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಡಿಮೆ ಅಂಕ: ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಯಲ್ಲಾಪುರ: ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ನೊಂದ ವಿದ್ಯಾರ್ಥಿನಿ ದೀಪಿಕಾ ಪೂಜಾರಿ (೧೮) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿಸಗೋಡದಲ್ಲಿ ನಡೆದಿದೆ.
ದೀಪಿಕಾ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ೬೨% ಅಂಕಗಳು ಪಡೆದುಕೊಂಡಿದ್ದಳು. ಅಂಕಗಳು ಕಡಿಮೆಯಾಯಿತು ಎಂದು ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತೋಟದಲ್ಲಿರುವ ಬಾವಿಗೆ ಹಾರಿ ಮೃತಪಟ್ಟಿರುತ್ತಾಳೆ ಎಂದು ಮೃತಳ ತಂದೆ ಮಂಜುನಾಥ್ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version