Home ತಾಜಾ ಸುದ್ದಿ ಕಂಬಳ ‘ಲಕ್ಕಿ’ ಇನ್ನಿಲ್ಲ

ಕಂಬಳ ‘ಲಕ್ಕಿ’ ಇನ್ನಿಲ್ಲ

0


ಮಂಗಳೂರು: ‘ಕಂಬಳ’ದಲ್ಲಿ ಹಲವು ಮೆಡಲ್ ಗೆದ್ದಿದ್ದ ಲಕ್ಕಿ ಕೋಣ ಇಂದು ಸಾವನ್ನಪ್ಪಿದೆ.
ಕಳೆದ ವರ್ಷದ ಕಂಬಳ ಸೀಸನ್‌ಲ್ಲಿ ಲಕ್ಕಿ ಐದು ಮೆಡಲ್ ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ಪ್ರಥಮವಾಗಿ ನಡೆದ ಕಂಬಳದಲ್ಲಿ ಲಕ್ಕಿ ನೇಗಿಲು ಹಿರಿಯ ವಿಭಾಗದಲ್ಲಿ ಎರಡನೇ ಬಹುಮಾನ ಪಡೆದಿತ್ತು.
ಕುಕ್ಕೆಪದವು, ನರಿಂಗಾನ, ಐಕಳ, ಜೆಪ್ಪು ಹಾಗೂ ಬೆಂಗಳೂರಿನ ಕಂಬಳದಲ್ಲಿ ಲಕ್ಕಿ ಮೆಡಲ್ ಪಡೆದು ಹೆಸರಾಗಿತ್ತು. ವರಪಾಡಿ ಬಡಗುಮನೆ ದಿವಾಕರ ಚೌಟ ಲಕ್ಕಿಯನ್ನು ಸಾಕಿದ್ದರು. ಲಕ್ಕಿ ಆಗಲಿಕೆಗೆ ಕಂಬಳ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

Exit mobile version