Home ಅಪರಾಧ ಒಂದೇ ಕುಟುಂಬದ ಮೂವರು ಯುವಕರು ನೀರು ಪಾಲು

ಒಂದೇ ಕುಟುಂಬದ ಮೂವರು ಯುವಕರು ನೀರು ಪಾಲು

0

ಗದಗ : ಜನ್ಮದಿನದಂಗವಾಗಿ ದೇವರ ದರ್ಶನಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ನಡೆದಿದೆ.
ನದಿಯಲ್ಲಿ ಈಜಲು ತೆರಳಿದ್ದ ಐವರಲ್ಲಿ ಇಬ್ಬರು ಪಾರಾಗಿದ್ದಾರೆ.
ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿರುವ ಯುವಕರನ್ನು ಶಿರಹಟ್ಟಿಯ ಶರಣಪ್ಪ ಬಡಿಗೇರ್ (೩೪) ಮಹೇಶ್ ಬಡಿಗೇರ್ (೩೬) ಗುರುನಾಥ್ ಬಡಿಗೇರ್ (೩೮) ಎಂದು ಗುರುತಿಸಲಾಗಿದೆ. ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಘಟನೆ ನಡೆದಿದೆ.
ಶಿರಹಟ್ಟಿಯ ಶರಣಪ್ಪ ಬಡಿಗೇರ ಸಹೋದರರು ಸ್ನೇಹಿತರೊಂದಿಗೆ ಕೊರ್ಲಹಳ್ಳಿಯ ತುಂಗಭದ್ರಾ ನದಿ ತಟದಲ್ಲಿರುವ ಹನುಮಂತ ದೇವಾಲಯಕ್ಕೆ ಆಗಮಿಸಿದ್ದರು. ಮಹೇಶ್ ಬಡಿಗೇರ್ ಈಜಲು ಬಾರದಿದ್ದರೂ ನದಿಗೆ ಇಳಿದಿದ್ದನೆನ್ನಲಾಗಿದೆ. ಈಜಲು ಬಾರದೆ ನದಿಯಲ್ಲಿ ಕೊಚ್ಚಿ ಹೊರಟಿದ್ದ ಮಹೇಶ್‌ನನ್ನು ರಕ್ಷಿಸಲು ನದಿಗೆ ಇಳಿದಿದ್ದ ಶರಣಪ್ಪ, ಗುರುನಾಥ್ ಮೂವರು ನದಿಯಲ್ಲಿ ಕೊಚ್ಚಿಹೋಗಿದ್ದಾರೆಂದು ತಿಳಿದು ಬಂದಿದೆ.
ನದಿಯಲ್ಲಿ ನಾಪತ್ತೆಯಾಗಿರುವ ಮೂವರು ಯುವಕರಿಗೆ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆಯೆಂದು ಮೂಲಗಳು ತಿಳಿಸಿವೆ

Exit mobile version