Home News ಎಸ್‌ಡಿಪಿಐ ಕಾರ್ಯಕರ್ತರಿಂದ ಪ್ಯಾಲಿಸ್ತೇನ್ ಪರ ಬ್ಯಾನರ್ ಪ್ರದರ್ಶನ

ಎಸ್‌ಡಿಪಿಐ ಕಾರ್ಯಕರ್ತರಿಂದ ಪ್ಯಾಲಿಸ್ತೇನ್ ಪರ ಬ್ಯಾನರ್ ಪ್ರದರ್ಶನ

ದಾವಣಗೆರೆ: ಮುಸ್ಲಿಂ ಸಮುದಾಯದ ಪವಿತ್ರ ಈದ್ ಉಲ್ ಫಿತರ್ (ರಂಜಾನ್) ಅಂಗವಾಗಿ ಸೋಮವಾರ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಎಸ್‌ಡಿಪಿಐನ ಕೆಲ ಕಾರ್ಯಕರ್ತರು ಪ್ಯಾಲಿಸ್ತೇನ್ ಪರ, ವಕ್ಫ್ ತಿದ್ದುಪಡಿ ವಿರೋಧಿಸಿ ಬ್ಯಾನರ್ ಪ್ರದರ್ಶನ ನಡೆಸಿದರು.
ಪ್ಯಾಲಿಸ್ತೇನ್ ಮುಕ್ತವಾಗಲಿ, ದಾಳಿ ನಿಂತು ಶಾಂತಿ ನೆಲೆಸಲಿ ಎಂಬ ಬರಹದ ಬ್ಯಾನರ್ ಅನ್ನು ಕೆಲವರು ಪ್ರದರ್ಶಿಸಿದರು. ಇನ್ನು ಕೆಲವರು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿರೋಧಿಸಿ ಕೈಗೆ ಕಪ್ಪುಪಟ್ಟಿ ಧರಿಸಿ ಬ್ಯಾನರ್ ಪ್ರದರ್ಶಿದರು. ಬ್ಯಾನರ್ ಪ್ರದರ್ಶನದ ಫೋಟೋ, ವಿಡಿಯೋ ಹರಿದಾಡುತ್ತಿವೆ.

Exit mobile version