Home ಅಪರಾಧ ಭೀಮಾ ನದಿಯಲ್ಲಿ ಯುವಕ ನಾಪತ್ತೆ

ಭೀಮಾ ನದಿಯಲ್ಲಿ ಯುವಕ ನಾಪತ್ತೆ

0

ಕಲಬುರಗಿ: ಭೀಮಾ ನದಿಯಲ್ಲಿ ಈಜಾಡಲು ತೆರಳಿದ್ದ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಜೇವರ್ಗಿ ತಾಲೂಕಿನ ಸರಡಗಿ ಬ್ರಿಡ್ಜ್‌ ಬಳಿ ಈ ಘಟನೆ ನಡೆದಿದ್ದು, ನದಿ ಪಾಲಾದ ಯುವಕನನ್ನು ಮಹಾದೇವ್ (20) ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಐದು ಜನ ಸ್ನೇಹಿತರು ಭೀಮಾ ನದಿಯಲ್ಲಿ ಈಜಾಡಲು ತೆರಳಿದ್ದ ವೇಳೆ ಈಜು ಬಾರದೇ ಮಹಾದೇವ್ ನದಿಯ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ. ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರೆದಿದೆ. ಘಟನೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version