Home ಅಪರಾಧ ಆಹಾರ ಸುರಕ್ಷತಾ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಆಹಾರ ಸುರಕ್ಷತಾ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

0

ಕಲಬುರಗಿ: ನೀರು ಶುದ್ಧೀಕರಣ ಘಟಕದ ನವೀಕರಣ ಮಾಡಿಕೊಡಲು ಆಹಾರ ಸುರಕ್ಷತಾ ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.
ಬುಧವಾರ ತಡರಾತ್ರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಕಚೇರಿಯ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ದೃವತಾರೆ ಅವರ ತಂಡ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದಿದೆ. ಮಹಮದ್ ಮುಕ್ತಿದೀರ್ ಎಂಬುವರಿಂದ ನೀರು ಶುದ್ಧೀಕರಣ ಘಟಕದ ನವೀಕರಣ ಮಾಡಿಕೊಡಲು ₹40 ಸಾವಿರ ಲಂಚ ಪಡೆಯುವಾಗ ಆಹಾರ ಸುರಕ್ಷತಾ ಅಧಿಕಾರಿಗಳಾದ ಪರಮೇಶ್ವರ ಮಠಪತಿ ಹಾಗೂ ಕಿರಣ್ ಚಲವಾದಿ ಸಿಕ್ಕಿ ಬಿದ್ದಿದ್ದಾರೆ.

Exit mobile version