Home ತಾಜಾ ಸುದ್ದಿ ಆರ್ಟಿಕಲ್ ೩೭೦ ವಾಪಸ್ ಬರದು

ಆರ್ಟಿಕಲ್ ೩೭೦ ವಾಪಸ್ ಬರದು

0

ದೆಹಲಿ: ಆರ್ಟಿಕಲ್ ೩೭೦ ಈಗ ಇತಿಹಾಸದ ಒಂದು ಭಾಗವಷ್ಟೆ. ಅದೆಂದೂ ಮತ್ತೆ ಜಮ್ಮು ಕಾಶ್ಮೀರದಲ್ಲಿ ವಾಪಸ್ ಬರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, ಭಾರತ ಹಾಗೂ ಜಮ್ಮು ಕಾಶ್ಮೀರದ ಇತಿಹಾಸವನ್ನ ಬರೆಯುವಾಗ ೨೦೧೪ರಿಂದ ೨೦೨೪ರ ಅವಧಿಯನ್ನು ಸುವರ್ಣಾಕ್ಷರಗಳಿಂದ ಬರೆದಿಡಲಾಗುತ್ತದೆ. ಉಗ್ರವಾದಿಗಳ ತಾಣವಾಗಿದ್ದ ಜಮ್ಮು ಕಾಶ್ಮೀರ ಈಗ ಪ್ರವಸೋದ್ಯಮದ ತಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾದಲ್ಲಿ ಜಮ್ಮು ಕಾಶ್ಮೀರ ಶಾಂತಿ ಹಾಗೂ ಅಭಿವೃದ್ಧಿಯ ಹೊಸ ಯುಗವೊಂದನ್ನ ಕಾಣುತ್ತಿದೆ ಎಂದು ಅಮಿತ್ ಶಾ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದತಿ ಬಳಿಕ ಮೊದಲ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕಾಶ್ಮೀರಿ ಪಂಡಿತರನ್ನ ಸುರಕ್ಷಿತವಾಗಿ ಮತ್ತೆ ಕಾಶ್ಮೀರಕ್ಕೆ ಕರೆತರುವುದು, ಜಮ್ಮು ಕಾಶ್ಮೀರದಲ್ಲಿದ್ದ ಪುರಾತನ ದೇವಸ್ಥಾನಗಳನ್ನ ಮತ್ತೆ ಪುನರುತ್ಥಾನ ಮಾಡುವುದು ಹಾಗೂ ಭಯೋತ್ಪಾದನೆಯನ್ನು ಕಣಿವೆ ನಾಡಿನಲ್ಲಿ ಇನ್ನಿಲ್ಲವಾಗಿಸುದು ಸೇರಿದಂತೆ ಇನ್ನೂ ಹಲವಾರು ಅಂಶಗಳು ಬಿಜೆಪಿ ಪ್ರಣಾಳಿಕೆಯಲ್ಲಿವೆ.

Exit mobile version