Home ನಮ್ಮ ಜಿಲ್ಲೆ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಜಿನೈಕ್ಯ

ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಜಿನೈಕ್ಯ

0

ಬೆಳಗಾವಿ(ಯಕ್ಸಂಬಾ): ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ ಮಹಾರಾಜರು ಭಾನುವಾರ ಬೆಳಗಿನ ಜಾವ ಎರಡು ಗಂಟೆ ಹೊತ್ತಿಗೆ ಚಂದ್ರಗಿರಿ ಜೈನ ತೀರ್ಥ ಡೋಂಗರಗಡ ಛತ್ತೀಸಗಡದಲ್ಲಿ ಜಿನೈಕ್ಯರಾಗಿದ್ದಾರೆ. ಮಹಾರಾಜರ ಜನ್ಮಭೂಮಿ ಸದಲಗಾ ಪಟ್ಟಣದಲ್ಲಿ ನೀರವಮೌನ ಆವರಿಸಿದೆ.
ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಮಹಾರಾಜರು, ಮೂರು ದಿನಗಳಿಂದ ನೀರು, ಆಹಾರವನ್ನು ಸಂಪೂರ್ಣ ತ್ಯಜಿಸಿ, ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಾರೆ.

Exit mobile version