Home ತಾಜಾ ಸುದ್ದಿ ಅಮಿತ್ ಶಾ ಹೇಳಿಕೆ: ಮೈಸೂರು ಬಂದ್

ಅಮಿತ್ ಶಾ ಹೇಳಿಕೆ: ಮೈಸೂರು ಬಂದ್

0

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಕರೆ ನೀಡಿರುವ ಮೈಸೂರು ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು ಗ್ರಾಮಾಂತರ ಬಸ್ ನಿಲ್ದಾಣ(ಸಬ್ ಅರ್ಬನ್) ಮುಂಭಾಗ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರತಿಭಟನಾನಿರತರು ಧರಣಿಗೆ ಕುಳಿತು, ಬಸ್‌ಗಳ ಓಡಾಟ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ ಪ್ರತಿಕೃತಿ ಅಣಕು ಶವಯಾತ್ರೆ ನಡೆಸಿದರು, ಮೆರವಣಿಗೆ ತೆರಳಲು ಪೊಲೀಸರು ಅವಕಾಶ ನೀಡದಿದ್ದಾಗ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು.

Exit mobile version