Home ನಮ್ಮ ಜಿಲ್ಲೆ ಉತ್ತರ ಕನ್ನಡ ಅಪರೂಪದ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆ

ಅಪರೂಪದ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆ

0

ಕುಮಟಾ: ತಾಲೂಕಿನ ಮಿರ್ಜಾನಿನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಅಪರೂಪದ ಬಿಳಿ ಹಾವು ಪತ್ತೆಯಾಗಿದೆ.
ಅಪರೂಪ ಬಣ್ಣದ ಹಾವು ಕಂಡು ಬಂದ ವಿಷಯವನ್ನು ಮನೆಯವರಿಂದ ತಿಳಿದ ಉರಗ ತಜ್ಞ ಪವನ್ ಎಂ. ನಾಯ್ಕ ಸ್ಥಳಕ್ಕೆ ಧಾವಿಸಿ ಹಾವನ್ನು ಪರಿಶೀಲಿಸಿ ಇದು ಬಿಳಿ ಹೆಬ್ಬಾವು ಎಂದು ಖಾತ್ರಿಪಡಿಸಿದರು.‌

ಈ ಹಾವಿನ ಕುರಿತು ಮಾಹಿತಿ ನೀಡಿರುವ ಪವನ್ ನಾಯ್ಕ, ಇಂತಹ ಹಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್‌ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರೋ ಕಾರಣ ಇದನ್ನ ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಆದರೂ ಇದು ಕರ್ನಾಟಕದಲ್ಲಿ ಸಿಕ್ಕಿರುವ 2ನೇ ಬಿಳಿ ಹಾವು. ಈ ಹಾವನ್ನು ಸುರಕ್ಷಿತ ಜಾಗಕ್ಕೆ ಬಿಡಲಾಗುವುದು ಎಂದರು.

Exit mobile version