ಧಾರವಾಡ: ಅವಳಿನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದರೂ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಕೆಲವು ಜಾಗೃತ ನಾಗರಿಕರು ನನಗೆ ಕರೆ ಮಾಡಿ ಹೊರಗಿನ ಜನ ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯಾವ ರೀತಿ ಇದ್ದಾರೆ ಎಂದು ಕೇಳಿದಾಗ ಅವರು ಬೇರೆ ರೀತಿಯ ಜನ ಅದಾರ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಜನರ ರೀತಿ ಕಾಣಸ್ತಾರೆ ಎಂದು ಕೇಳಿದಾಗ ಇಲ್ಲಾ ಪಾಕಿಸ್ತಾನ ಜನರ ರೀತಿ ಕಾಣಿಸುತ್ತಾರೆ ಎಂದಿದ್ದಾರೆ.
ನಾನು ಆಯುಕ್ತರಿಗೆ ಕಾಲ್ ಮಾಡಿ ಹೇಳಿದೆ, ಅಷ್ಟೇ ಅಲ್ಲದೆ ಆಯಕ್ತರಿಗೆ ಹಾಗೂ ಗೃಹಮಂತ್ರಿಗೆ ಪತ್ರ ಬರೆದೆ. ಇದು ಸೂಕ್ಷ್ಮ ವಿಚಾರವಾಗಿದ್ದಕ್ಕೆ ಯಾವ ಪತ್ರಿಕೆಗೆ ಹಾಗೂ ಮೀಡಿಯಾಗೆ ಹೇಳಿಕೆ ನೀಡಿರಲಿಲ್ಲಾ, ಅವರಿಗೆ ತನಿಖೆಗೆ ಅನೂಕೂಲವಾಗಲೆಂದು ನಾನು ಹೇಳಿಲ್ಲ, ಆದರೆ ಎಂಟು ದಿನಾ ಆಯ್ತು ಪತ್ರ ಬರೆದು, ಯಾವುದೇ ವಿಚಾರಣೆ ಆಗಿಲ್ಲಾ ಎಂದರು. ಪೊಲೀಸ್ ಕಮಿಷನರ್ ಪತ್ರದ ಬಗ್ಗೆ ಮಾಹಿತಿ ಇಲ್ಲಾ ಎಂದು ಹೇಳುತ್ತಿದ್ದಾರೆ, ಇದೊಂದು ಬೇಜವಾಬ್ದಾರಿ ಹೇಳಿಕೆ, ಇಷ್ಟೊಂದು ಸೀರಿಯಸ್ ಅಲಿಗೇಷನ್ ಮಾಡಿದಾಗೂ ಅವರ ಈ ರೀತಿಯ ಉತ್ತರ ಬೇಸರ ಮೂಡಿಸಿದೆ ಎಂದಿದ್ದಾರೆ.
ಆಯುಕ್ತರಿಗೆ ಅಷ್ಟೇ ಅಲ್ಲಾ ನಾನು ಗೃಹ ಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ದೇಶಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್ ಅಂತಾ ಹೇಳುತ್ತಿದ್ದಾರೆ ಮೇಲಿನವರು, ಕೇಳಗಿನವರು ಕೂಡ ಅವರು ಹಂಗೆ ಅನುಕರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.