Home ಅಪರಾಧ ಅಂಜಲಿ ಹಂತಕನ ಮೇಲೆ ಮತ್ತೊಂದು ಪ್ರಕರಣ

ಅಂಜಲಿ ಹಂತಕನ ಮೇಲೆ ಮತ್ತೊಂದು ಪ್ರಕರಣ

0

ಹುಬ್ಬಳ್ಳಿ: ಅಂಜಲಿ ಹತ್ಯೆ ಆರೋಪಿ ಗಿರೀಶ್ ಮೇಲೆ ಮತ್ತೊಂದು ಎಫ್ ಐಆರ್ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆರು ತಿಂಗಳು ಹಿಂದೆ ವಿಶ್ವ ಅನ್ನುವ ವ್ಯಕ್ತಿ ನಮ್ಮ ಹುಡುಗಿಗೆ ಮಾತಾಡಿಸುತ್ತಿದ್ದು, ತೊಂದರೆ ಇದೆ ದುಡ್ಡು ಕೊಡು ಎಂದು ನಮ್ಮ ಮಗಳಿಗೆ 8000 ಪಡೆದುಕೊಂಡಿದ್ದಾನೆ.
ಅಲ್ಲದೇ, ಮನೆಯಲ್ಲಿದ್ದ ಐದುವರೆ ತೊಲೆ ಬಂಗಾರದಲ್ಲಿ ಅರ್ಧ ಬಂಗಾರ ಕೊಟ್ಟಿದ್ದಾಳೆ. ಮತ್ತೆ ಅವಳಿಗೆ ಬೆದರಿಕೆ ಹಾಕಿ ಮತ್ತೆ ಬಂಗಾರ,ಹಣ ತೆಗೆದುಕೊಂಡು ಬಾ ಅಂತ ಹೇಳಿದ್ದಾನೆ. ಬಂಗಾರ ವಾಪಸ್ಸು ಕೇಳಿದರೆ ತಂದೆ,ತಾಯಿನ ಕೊಲೆ ಮಾಡ್ತಿನಿ ಅಂತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ ಎಂದು ಬಾಲಕಿಯ ತಂದೆ ಬೆಂಡಿಗೇರಿ ಠಾಣೆಯಲ್ಲಿ ದೂರು‌ ದಾಖಲಾಗಿದೆ.

Exit mobile version