Home ಅಪರಾಧ ಅಂಜಲಿ ಕೊಲೆ ಆರೋಪಿ ಗುಣಮುಖ: ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

ಅಂಜಲಿ ಕೊಲೆ ಆರೋಪಿ ಗುಣಮುಖ: ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

0

ಹುಬ್ಬಳ್ಳಿ: ಅಂಜಲಿ ಅಂಬಿಗೇರ್ ಕೊಲೆ ಪ್ರಕರಣದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನಾಥ್ ಸಾವಂತ್ ಗುಣಮುಖನಾಗಿದ್ದು, ಬುಧವಾರ ಸಿಐಡಿ ಅಧಿಕಾರಿಗಳು ಆತನನ್ನ ವಶಕ್ಕೆ ಪಡೆದಿದ್ದಾರೆ.

ಕಿಮ್ಸ್ ಆಸ್ಪತ್ರೆಯಿಂದ ಅಜ್ಞಾತ ಸ್ಥಳಕ್ಕೆ ಗಿರೀಶ ಸಾಮಂತನನ್ನು ಕರೆದೊಯ್ದ ಅಧಿಕಾರಿಗಳು ತೀವೃ ವಿಚಾರಣೆಗೆ ಒಳಪಡಿಸಲಿದ್ದಾರೆ. ವಿಚಾರಣೆ ಬಳಿಕ ಇಂದೇ ಸ್ಥಳ ಮಹಾಜೂರ್, ಮಾಡುವ ಸಾಧ್ಯತೆ ಇದೆ.

ನೆಹ ಹಿರೇಮಠ ಕೊಲೆ ಪ್ರಕರಣವನ್ನು ತನಿಖೆ ಮಾಡಿದ್ದ ಸಿಐಡಿ ಅಧಿಕಾರಿಗಳೇ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಕೊಲೆಯ ಉದ್ದೇಶ, ಕೊಲೆಗೆ ಬಳಸಲಾದ ಮಾರಕಾಸ್ತ್ರ ಹಾಗೂ ಇನ್ನಿತರ ಮಾಹಿತಿಗಳನ್ನು ಕಲೆ ಹಾಕುವ ಸಾಧ್ಯತೆಗಳು ಇವೆ.

Exit mobile version