Home ಕ್ರೀಡೆ ೧೯ನೇ ಏಷ್ಯನ್ ಗೇಮ್ಸ್: ಏಷ್ಯಾಡ್‌ಗೆ ಭಾರತದ ಜರ‍್ಸಿ ಬಿಡುಗಡೆ

೧೯ನೇ ಏಷ್ಯನ್ ಗೇಮ್ಸ್: ಏಷ್ಯಾಡ್‌ಗೆ ಭಾರತದ ಜರ‍್ಸಿ ಬಿಡುಗಡೆ

0

ನವದೆಹಲಿ: ಇದೇ ೨೩ರಿಂದ ಅಕ್ಟೋಬರ್ ೮ರ ವರೆಗೆ ಚೀನಾದ ಹಾಂಗ್‌ಝೌನಲ್ಲಿ ೧೯ನೇ ಏಷ್ಯನ್ ಕ್ರೀಡಾಕೂಟ ನಡೆಯಲಿದ್ದು, `Heart to Heart, @Future’ ಎಂಬ ಘೋಷವಾಕ್ಯದೊಂದಿಗೆ ಈ ಕೂಟ ಆರಂಭವಾಗಲಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಭಾರತೀಯ ಅಥ್ಲೀಟ್‌ಗಳ ಜರ‍್ಸಿ, ಕಿಟ್ ಬಿಡುಗಡೆ ಹಾಗೂ ಅಥ್ಲೀಟ್‌ಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನವದೆಹಲಿಯಲ್ಲಿ ನಡೆದಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷೆ ಪಿ.ಟಿ.ಉಷಾ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ್ದಾರೆ. ಈಗಾಗಲೇ ಬಾಕ್ಸಿಂಗ್ ತಂಡ ಚೀನಾದ ಹಾಂಗ್‌ಝೌ ತಲುಪಿದೆ.

Exit mobile version