Home ತಾಜಾ ಸುದ್ದಿ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

0

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದ ತಂಪು ವಾತಾವರಣ ಇತ್ತು. ಮೋಡಗಳು ತೇಲಿ ಹೋಗುತ್ತಿರುವುದು ಬಿಟ್ಟರೆ ಮಳೆ ಸೂಚನೆ ಇರಲಿಲ್ಲ. ಮಧ್ಯಾಹ್ನ ಗಂಟೆ ಹೊತ್ತಿಗೆ ಮಳೆ ಸುರಿಯಲು ಆರಂಭಿಸಿತು. ಬಳಿಕ ಧಾರಾಕಾರ ಒಂದೇ ಸಮನೆ ಮಳೆ ಸುರಿಯಿತು.
ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ರವಿವಾರದ ಭರ್ಜರಿ ವ್ಯಾಪಾರ ಮೂಡ್ ನಲ್ಲಿದ್ದ ವ್ಯಾಪಾರಸ್ಥರು, ಸಣ್ಣಪುಟ್ಟ ವ್ಯಾಪಾರಸ್ಥರ ವ್ಯಾಪಾರ ಹದೆಗಟ್ಟಿತು. ಮಾರುಕಟ್ಟೆಗೆ ಬಂದಿದ್ದ ಜನರೂ ಕೊಡೆಗಳನ್ನು ಹಿಡಿದು ಸಂಚರಿಸಿದರು. ಕೊಡೆಗಳಿಲ್ಲದೇ ಬಂದವರು ಮಳೆ ಸಿಲುಕಿದರು. ಸಂಜೆ ಹೊತ್ತೂ ಮಳೆ ರಭಸವಾಗಿ ಸುರಿಯಿತು.

Exit mobile version