Home ತಾಜಾ ಸುದ್ದಿ ಸೇನಾ ಪಥಸಂಚಲನದಲ್ಲಿ ರೊಬೊಟಿಕ್ ನಾಯಿಗಳು!

ಸೇನಾ ಪಥಸಂಚಲನದಲ್ಲಿ ರೊಬೊಟಿಕ್ ನಾಯಿಗಳು!

0

ಪುಣೆ: ಭಾರತೀಯ ಸೇನೆ ಈಗ ಪುಣೆಯಲ್ಲಿ ನಡೆದ ಸೇನಾ ಪರೇಡ್‌ನಲ್ಲಿ ರೊಬೊಟಿಕ್ ನಾಯಿಗಳನ್ನು ಪ್ರದರ್ಶಿಸಿದೆ. ರೊಬೊಟಿಕ್ ಮ್ಯೂಲ್‌ಗಳೆಂಬ ಅಡ್ಡ ಹೆಸರಿನಿಂದ ಕರೆಯಲ್ಪಡುವ ಮಾನವರಹಿತ ಭೂವಾಹನಗಳು ಪರೇಡ್‌ನಲ್ಲಿ ಭಾಗವಹಿಸಿ ಸೇನೆಯ ಆಧುನಿಕರಣಕ್ಕೆ ಸಾಕ್ಷಿಯಾದವು. ಈ ರೊಬೊಟ್‌ಗಳನ್ನು ಪರಿಸರದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಇದರಿಂದ ಸೈನಿಕರಿಗಾಗುವ ಅಪಾಯ ಕಡಿಮೆಯಾಗಲಿದೆ. ಭದ್ರತೆ, ಆಸ್ತಿಗಳ ರಕ್ಷಣೆ, ಅಪಾಯಕಾರಿ ವಸ್ತುಗಳ ವಿಲೇವಾರಿ, ಬಾಂಬ್ ನಿಷ್ಕ್ರಿಯತೆ, ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನ್ಯೂ ಡೆಲ್ಲಿ ಮೂಲದ ಏರೊಆರ್ಕ್ ಎನ್ನುವ ಸಂಸ್ಥೆಯು ಇಂಥ ನಾಯಿಗಳನ್ನು ಅಭಿವೃದ್ಧಿಪಡಿಸಿದೆ. ಯಾಂತ್ರಿಕ ಅಥವಾ ರಿಮೋಟ್ ಮೂಲಕ ಈ ತಾಂತ್ರಿಕ ನಾಯಿಗಳನ್ನು ನಿಯಂತ್ರಿಸಲಾಗುತ್ತದೆ. ಇದರಲ್ಲಿ ಒಂದು ಕಂಪ್ಯೂಟರ್, ಬ್ಯಾಟರಿ, ಫ್ರಂಟ್ ಮತ್ತು ರಿಯರ್ ಸೆನ್ಸರ‍್ಸ್ ಹಾಗೂ ಚಲಿಸುವಂಥ ಕಾಲುಗಳಿರುತ್ತವೆ.

Exit mobile version