Home ನಮ್ಮ ಜಿಲ್ಲೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ಮನೆಗೆ ಹೋಗಲಿ

ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ಮನೆಗೆ ಹೋಗಲಿ

0

ವಿಜಯಪುರ: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಲಾಗದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ಮನೆಗೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಮಾತಾಡಿದ್ದರು. ಆಗಲೇ ತಾನು ಆದು ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಅಗಲಿದೆ ಎಂದಿದ್ದೆ, ಅದೀಗ ಸಾಬೀತಾಗುತ್ತಿದೆ, ಈ ಹಿಂದೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗ ಉಡಾಫೆ ಮಾತನಾಡಿದ್ದರು, ನಂತರ ಅದು ಭಯೋತ್ಪಾದಕ ಚಟಿವಟಿಕೆಗಳ ಭಾಗ ಎಂದು ಪ್ರೂವ್ ಆಯಿತು, ಈ ಸರ್ಕಾರಕ್ಕೆ ಜನರ ಪ್ರಾಣಗಳ ಬಗ್ಗೆ ಕಾಳಜಿಯೇ ಇದ್ದಂತಿಲ್ಲ, ಗ್ಯಾರಂಟಿಗಳ ಭರದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಸಿದ್ದರಾಮಯ್ಯನವರಿಗೆ ಭಯೋತ್ಪಾದಕ ಕೃತ್ಯಗಳನ್ನು ನಿಲ್ಲಿಸುವುದು ಸಾಧ್ಯವಾಗುತ್ತಿಲ್ಲ ಅಂತಾದರೆ ಸಿಎಂ ರಾಜೀನಾಮೆ ಕೊಡಲಿ. ವಿಧಾನ ಸಭೆ ವಿಸರ್ಜನೆ ಮಾಡಲಿ, ರಾಮೇಶ್ವರಂ ಹೊಟೇಲ್‌ನಲ್ಲಿ ನಡೆದಿದ್ದು ಒಂದು ಪ್ರಯೋಗವಾಗಿದೆ. ಈಗ ರಾಜ್ಯ ಭಯೋತ್ಪಾದಕರ ಪ್ರಯೋಗ ಶಾಲೆಯಾಗಿದೆ. ಇದಕ್ಕೆ ಅವಕಾಶ ಕೊಡಬಾರದು. ನಿಮಗೆ ಭಯೋತ್ಪಾದನೆ ತಡೆಯಲು ಆಗದಿದ್ದರೆ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version