Home ತಾಜಾ ಸುದ್ದಿ ಸಿಎಂ ಬದಲು: ಹೈಕಮಾಂಡ ತೀರ್ಮಾನ

ಸಿಎಂ ಬದಲು: ಹೈಕಮಾಂಡ ತೀರ್ಮಾನ

0

ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಸಂಬಂಧ ಯಾರು ಏನು ಹೇಳಿದ್ದಾರೆ ಎನ್ನುವುದಕ್ಕಿಂತ ಹೈಕಮಾಂಡ ತೀರ್ಮಾನ ಅಂತಿಮ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಈಗಾಗಲೇ ಮುಖ್ಯಮಂತ್ರಿಗಳಾಗಿರುವ ಸಿದ್ಧರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ ಮತ್ತು ಸಿದ್ಧರಾಮಯ್ಯನವರು ಮಾಸ್ ಲೀಡರ್, ಅವರಿಬ್ಬರೂ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನನಗೆ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಪಕ್ಷ ಕಲ್ಪಿಸಿಕೊಟ್ಟಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಹೈ ಕಮಾಂಡ ತೀರ್ಮಾನ ಏನಿದೆಯೋ ಅದನ್ನು ಪಕ್ಷದ ೧೩೬ ಶಾಸಕರು ಪಾಲಿಸುತ್ತೇವೆ ಎಂದು ಹೆಬ್ಬಾಳಕರ ಹೇಳಿದರು.

Exit mobile version