Home ಸುದ್ದಿ ದೇಶ ‘ವೈಎಸ್ಆರ್ ತೆಲಂಗಾಣ ಪಕ್ಷ’ ಕಾಂಗ್ರೆಸ್‌ನಲ್ಲಿ ವಿಲೀನ

‘ವೈಎಸ್ಆರ್ ತೆಲಂಗಾಣ ಪಕ್ಷ’ ಕಾಂಗ್ರೆಸ್‌ನಲ್ಲಿ ವಿಲೀನ

0

ನವದೆಹಲಿ: ವೈಎಎಸ್‍ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ ಎಸ್ ಶರ್ಮಿಳಾ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಜೊತೆಗೆ ವೈಎಸ್ ಆರ್ ತೆಲಂಗಾಣ ಪಕ್ಷವನ್ನು ವಿಲೀನಗೊಳಿಸಿದ್ದಾರೆ.
ಶರ್ಮಿಳಾ ಅವರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿಯಾಗಿದ್ದಾರೆ.
ಜಾತ್ಯತೀತ ತತ್ವ ಮೆಚ್ಚಿ ಕಾಂಗ್ರೆಸ್​ ಸೇರ್ಪಡೆಯ ಬಳಿಕ ಮಾತನಾಡಿರುವ ಅವರು ಇಂದು ವೈಎಸ್​ಆರ್​ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​ನಲ್ಲಿ ವಿಲೀನ ಮಾಡಿದ್ದೇವೆ. ಇಂದಿನಿಂದ ಅದು ಕಾಂಗ್ರೆಸ್ ಪಕ್ಷವಾಗಿ ಮುಂದುವರೆಯಲಿದೆ. ತೆಲಂಗಾಣದ ಅಭಿವೃದ್ಧಿಗೆ ಸರ್ಕಾರದ ಜೊತೆಗೂಡಿ ಕೆಲಸ ಮಾಡಲಿದ್ದೇವೆ. ಕಾಂಗ್ರೆಸ್​ ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗಾಗಿ ನಾವು ಶ್ರಮಿಸುತ್ತೇವೆ. ದೇಶದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ನನ್ನನ್ನು ಬೇಸರಗೊಳಿಸಿದವು. ಹೀಗಾಗಿ ನಾನು ಕಾಂಗ್ರೆಸ್​ ಸೇರಿ ಹೋರಾಟ ಮಾಡಲು ಬಯಸಿದೆ ಎಂದರು.

Exit mobile version