Home ತಾಜಾ ಸುದ್ದಿ ರಾಮಮಂದಿರಕ್ಕೆ ಹನುಮ ನಾಡಿನ ಮೃತ್ತಿಕೆ

ರಾಮಮಂದಿರಕ್ಕೆ ಹನುಮ ನಾಡಿನ ಮೃತ್ತಿಕೆ

0

ಬಾಗಲಕೋಟೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ರಾಮ ಮಂದಿರ ನಿರ್ಮಾಣಕ್ಕೆ 2018 ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು, ಹಿಂದೂಗಳ ಈ ಪವಿತ್ರ ಸ್ಥಳವಾದ ರಾಮ ಜನ್ಮಸ್ಥಳಕ್ಕೆ ಅಪ್ಪಟ ಶಿಷ್ಯನಾಗಿರುವ ಕರ್ನಾಟಕ ರಾಜ್ಯದ ಹನುಮನ ನಾಡಿನ ಮೃತ್ತಿಕೆ ಸಂಗ್ರಹ ಕಾರ್ಯಕ್ರಮ ಶೀಘ್ರ ಜರುಗಲಿದೆ ಎಂದು ಯುವ ಬ್ರಿಗೇಡ್‌ನ ಸೂಲಿಬೆಲೆ ಚಕ್ರವರ್ತಿ ತಿಳಿಸಿದರು.
ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಇರುವ ಆಂಜನೇಯ ದೇವಾಲಯದ ಮೃತ್ತಿಕೆ ಸಂಗ್ರಹ ಕಾರ್ಯ ನಡೆಯಲಿದ್ದು, ಆಯಾ ಭಾಗಗಳಿಂದ ಸಂಗ್ರಹಿಸಿ ನೇರ ಅಯೋಧ್ಯೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಸೂಲಿಬೆಲೆ ಹೇಳಿದರು.

Exit mobile version