Home ತಾಜಾ ಸುದ್ದಿ ಮೈಸಾ ಆದ ಮಂದಣ್ಣ

ಮೈಸಾ ಆದ ಮಂದಣ್ಣ

0

ರಗಡ್‌ ಲುಕ್‌ನಲ್ಲಿ ರಶ್ಮಿಕಾ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ ‘ಮೈಸಾ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ರಶ್ಮಿಕಾ ಅವರ ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮಹಿಳಾ ಪ್ರಧಾನ ಈ ಚಿತ್ರಕ್ಕೆ ‘ಮೈಸಾ’ ಎಂಬ ಟೈಟಲ್ ಇಡಲಾಗಿದ್ದು ಶೀರ್ಷಿಕೆಯಿಂದಲೇ ಗಮನ ಸೆಳೆಯುವಂತಿದೆ. ಅವರ ಲುಕ್ ಕೂಡ ಭಿನ್ನವಾಗಿದೆ. ಫಸ್ಟ್ ಲುಕ್ ಪೋಸ್ಟ್‌ರನಲ್ಲಿ ರಶ್ಮಿಕಾ ಕೈಯಲ್ಲಿ ಆಯುಧ ಹಿಡಿದಿದ್ದು ಮುಖಕ್ಕೆ ರಕ್ತ ಅಂಟಿದೆ. ಅವರು ಕಣ್ಣಲ್ಲೇ ಸುಡುತ್ತಿದ್ದಾರೆ. ‘ಮೈಸಾ’ ಪ್ಯಾನ್ ಇಂಡಿಯಾ ಚಿತ್ರ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಎಂಬುವವರು ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ.

Exit mobile version