Home ತಾಜಾ ಸುದ್ದಿ ಬಿಸಿಲಿಗೆ ಕುಸಿದು ಬಿದ್ದ ಸಿದ್ದರಾಮಯ್ಯ

ಬಿಸಿಲಿಗೆ ಕುಸಿದು ಬಿದ್ದ ಸಿದ್ದರಾಮಯ್ಯ

0

ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎನ್.ಟಿ. ಶ್ರೀನಿವಾಸ್ ಪರವಾಗಿ ಶನಿವಾರ ಭರ್ಜರಿ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಸಿಲಿನ ತಾಪಕ್ಕೆ ತಾಳಲಾರದೇ ಕುಸಿದು ಬಿದ್ದ ಘಟನೆ ನಡೆದಿದೆ.
ಹೆಲಿಕಾಪ್ಟರ್ ಮೂಲಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕಾರು ಬಾಗಿಲು ತೆಗೆದು ಕಾರನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಾರೆ. ನಂತರ ಕಾರಿನ ಸೀಟಿನ ಒಳಗೆ ಕೂಡಿಸಿ ಅವರಿಗೆ ಆರೈಕೆ ಮಾಡಿದ ಸ್ವತಃ ವೈದ್ಯರಾಗಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಶ್ರೀನಿವಾಸ ಅವರು ಗ್ಲುಕೋಸ್‌ ಕುಡಿಸಿದ್ದಾರೆ. ಇನ್ನು ಗುಕ್ಲೋಸ್ ಕುಡಿದ ಬಳಿಕ ಮತ್ತೆ ಚೇತರಿಸಿಕೊಂಡು ಜನರತ್ತ ಕೈ ಬಿಸಿದ ಸಿದ್ದರಾಮಯ್ಯ ಕಾರಿನಲ್ಲಿ ಹೆಲಿಪ್ಯಾಡ್‌ನಿಂದ ಪ್ರಚಾರಕ್ಕೆ ತೆರಳಿದರು.

Exit mobile version