Home ನಮ್ಮ ಜಿಲ್ಲೆ ಇಂದು ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

ಇಂದು ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

0

ಬೆಂಗಳೂರು: ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಇಂದು ಲೀಲಾವತಿ ಅವರು ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂಭತ್ತು ವರ್ಷ ತುಂಬಿದ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಚುನಾವಣೆ ಆಯೋಗ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ.

Exit mobile version