Home ತಾಜಾ ಸುದ್ದಿ ಬಳ್ಳಾರಿ: ಮತ ಎಣಿಕೆ ಕಾರ್ಯ ಆರಂಭಕ್ಕೆ ಕ್ಷಣ ಗಣನೆ

ಬಳ್ಳಾರಿ: ಮತ ಎಣಿಕೆ ಕಾರ್ಯ ಆರಂಭಕ್ಕೆ ಕ್ಷಣ ಗಣನೆ

0

ಬಳ್ಳಾರಿ: ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆರಂಭಕ್ಕೆ ಕ್ಷಣ ಗಣನೆ ಆರಂಭ ಆಗಿದೆ. ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು.
ಎಂಟು ಗಂಟೆಯಿಂದ ಮತ ಎಣಿಕೆ ಆರಂಭ ಆಗಲಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ತದ ನಂತರ ಮತ ಯಂತ್ರದಲ್ಲಿನ ಮತ ಎಣಿಕೆ ಕಾರ್ಯ ಆರಂಭ ಆಗಲಿದೆ.
ಬಳ್ಳಾರಿ ನಗರ ಕ್ಷೇತ್ರ 19, ಸಂಡೂರು 18, ಕಂಪ್ಲಿ, ಸಿರುಗುಪ್ಪ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರ ವೇಳಿವ ನಿರೀಕ್ಷೆ ಇದೆ.

Exit mobile version