Home ತಾಜಾ ಸುದ್ದಿ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ

0

ಕ್ವೆಟ್ಟಾ: ಪಾಕಿಸ್ತಾನದ ಸಾರ್ವಧಿಕಾರ ವಿರುದ್ಧ ಬಂಡೆದ್ದಿರುವ ಬಲೂಚಿಸ್ತಾನ್ ಈಗ ಪಾಕ್‌ನಿಂದ ಪ್ರತ್ಯೇಕವಾಗಿದ್ದು ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಬುಧವಾರ ಬಲೂಚ್‌ನ ಪ್ರತಿನಿಧಿಯಾದ ಮಿರ್ ಯಾರ್ ಬಲೂಚ್ ಅವರು ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವತಂತ್ರಗೊಂಡಿರುವುದನ್ನು ಘೋಷಿಸಿದ್ದಾರೆ ಹಾಗೂ ಪ್ರತ್ಯೇಕ ರಾಷ್ಟ್ರಕ್ಕಾಗಿ ಭಾರತ ಮತ್ತು ಜಾಗತಿಕ ಸಮುದಾಯದ ಬೆಂಬಲ ಕೋರಿದ್ದಾರೆ.
ಬಲೂಚಿ ಯಾವತ್ತೂ ಪಾಕಿಸ್ತಾನದ ಭಾಗವಾಗಿರಲಿಲ್ಲ. ಬ್ರಿಟಿಷರು ಬಲೂಚಿಸ್ತಾನ ಒಳಗೊಂಡಂತೆ ಭಾರತೀಯ ಉಪಖಂಡವನ್ನು ತೊರೆಯುತ್ತಿದ್ದಾಗಲೇ ೧೯೪೭ರ ಆಗಸ್ಟ್ ೧೧ರಂದು ನಮ್ಮ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದೇವೆ. ಆದ್ದರಿಂದ ಇನ್ನು ನಮ್ಮನ್ನು ಪಾಕಿಸ್ತಾನದ ಜನರು ಎಂದು ಕರೆಯಬೇಡಿ ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

Exit mobile version