Home News ಸಕಲ ಸರ್ಕಾರಿ ಗೌರವದೊಂದಿಗೆ ವೀರ ಯೋಧ ಶೇಖಪ್ಪ ಅಂಕಲಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವದೊಂದಿಗೆ ವೀರ ಯೋಧ ಶೇಖಪ್ಪ ಅಂಕಲಿ ಅಂತ್ಯಕ್ರಿಯೆ

ಧಾರವಾಡ(ನವಲಗುಂದ): ತೀವ್ರ ಅನಾರೋಗ್ಯ ಕಾರಣದಿಂದ ನಿಧನರಾದ ಸಿಆ‌ರ್‌ಪಿಎಫ್ ಯೋಧ ಶೇಖಪ್ಪ ಅಂಕಲಿ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರು ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸಂಜೆ ನೆರವೇರಿತು.
45 ವರ್ಷದ ಯೋಧ ಶೇಖಪ್ಪ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದರು.
ಯೋಧ ಶೇಖಪ್ಪ ಅವರ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಹುಬ್ಬಳ್ಳಿಯಿಂದ ಶಲವಡಿ ತರಲಾಯಿತು. ಗ್ರಾಮದ ಮಹಿಳೆಯರು ಪಾರ್ಥಿವ ಶರೀರ ಬರುವ ಮಾರ್ಗದಲ್ಲಿ ರಂಗೋಲಿ ಬಿಡಿ ವಿಶೇಷ ಗೌರವ ಅರ್ಪಿಸಿದರು.
ಈ ವೇಳೆ ಅಮರ್ ರಹೇ ಅಮರ್ ರಹೇ ಶೇಖಪ್ಪ ಅಮ‌ರ್ ರಹೇ ಎಂಬ ಘೋಷಣೆ ಮೊಳಗಿತು. ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿತ್ತು. ಶೇಖಪ್ಪ ಅವರ ಕುಟುಂಬಸ್ಥರು, ಶಾಸಕ ಎನ್.ಎಚ್.ಕೋನರಡ್ಡಿ, ಗ್ರಾಮದ ಮುಖಂಡರು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದುಕೊಂಡರು.
ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಶೇಖಪ್ಪ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸರ್ಕಾರಿ ಸ್ಮಶಾನಕ್ಕೆ ಸಾಗಿಸಲಾಯಿತು. ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಮೃತ ಯೋಧ ಶೇಖಪ್ಪ ಅವರಿಗೆ ಸರ್ಕಾರಿ ಗೌರವ ಸಲ್ಲಿಸಿದರು.

Exit mobile version