ಜಮಖಂಡಿ: ಪಟ್ಟಣದ ಹೊರಲವಯದ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳನ್ನು ಕಾರ್ಮಿಕರಂತೆ ಬಳಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೇಂದ್ರ ಕಾರಾಗೃಹಕ್ಕೆ ನೀರು ಸರಬರಾಜುವಾಗುವ ಪೈಪ್ಲೈನ್ ಒಡೆದು ಹೋಗಿದ್ದನ್ನು ಕಾರಾಗೃಹದಲ್ಲಿನ ವಿಚಾರಧೀನ ಕೈದಿಗಳಿಂದಲೇ ರಿಪೇರಿ ಕಾಮಗಾರಿ ಮಾಡಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಂದಿತ ಆರೋಪಿಗಳಿಂದ ರಾಜಾರೋಶವಾಗಿ ರಿಪೇರಿ ಕೆಲಸ ಮಾಡಿಸಿದ್ದು ಸಾಮಾಜಿಕ ಜಾಲದಲ್ಲಿ ಹರಿದಾಡಿದ್ದು ಕಾರಾಗೃಹ ಅಧಿಕಾರಿಗಳ ನಡೆಗೆ ಆಕ್ರೋಶಕ್ಕೆ ಕಾರಣವಾಗಿದೆ.
ಕಾರಾಗೃಹಕ್ಕೆ ನೀರು ಸರಬರಾಜುವಾಗುತಿದ್ದ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಬದಿಯಲ್ಲಿ ಒಡೆದಿದ್ದ ಪೈಪ್ಲೈನ್ನ್ನು ಕಾರ್ಮಿಕರನ್ನು ಬಳಸುವುದನ್ನು ಬಿಟ್ಟು ಬಂಧಿತ ಆರೋಪಿಗಳನ್ನು ಬಳಸಿಕೊಂಡಿದ್ದನ್ನು ನಾಗರಿಕರು ಖಂಡಿಸಿದ್ದಾರೆ.
ಮೇಲಿಂದ ಮೇಲೆ ಪೈಪ್ಲೈನ್ ಒಡೆದು ಹಾಳಾಗುತ್ತಿತ್ತು, ಕಾರಾಗೃಹದಲ್ಲಿ ನೀರಿನ ತೊಂದರೆ ಉಂಟಾಗುತ್ತಿತ್ತು ಸಿಬ್ಬಂದಿಗಳ ರಕ್ಷಣೆಯಲ್ಲೆ ಕರೆದುಕೊಂಡು ಹೋಗಿ ರಿಪೇರಿ ಕೆಲಸ ಮಾಡಿಸಲಾಗಿದೆ ಎಂದು ಕಾರಾಗೃಹ ಅಧಿಕ್ಷಕ ವಿ.ಡಿ.ಕುಂಬಾರ ತಿಳಿಸಿದ್ದಾರೆ.