Home ತಾಜಾ ಸುದ್ದಿ ನಾ ನಾಯಕಿ ಅಲ್ಲ, ನಾ ನಾಲಾಯಕಿ

ನಾ ನಾಯಕಿ ಅಲ್ಲ, ನಾ ನಾಲಾಯಕಿ

0

ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ನಡೆಸುತ್ತಿರುವ ಕಾರ್ಯಕ್ರಮ ನಾ ನಾಯಕಿ ಅಲ್ಲ, ನಾ ನಾಲಾಯಕಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಏನೇ ಮಾಡಿದರೂ ಉತ್ತರ ಪ್ರದೇಶದಲ್ಲಿ ದೊರೆತ ಫಲಿತಾಂಶವೇ ರಾಜ್ಯದಲ್ಲಿ ಅವರಿಗೆ ಸಿಗಲಿದೆ. ಸಂಪೂರ್ಣವಾಗಿ ಕಾಂಗ್ರೆಸ್ ಅಪ್ರಸ್ತುತ ಪಕ್ಷ, ಇಡೀ ದೇಶದಲ್ಲಿ ಎಲ್ಲಾ ಕಡೆ ಸೋಲುತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಒಂದು ಸಮಸ್ಯೆ. ಅಲ್ಲಿರುವವರೆಲ್ಲ ತಮಗೆ, ತಮ್ಮ ಕುಟುಂಬಕ್ಕೆ ಏನು ಲಾಭ ಎನ್ನುವವರೇ ಇದ್ದಾರೆ ಹೊರತು ರಾಜ್ಯದ, ದೇಶದ ಅಭಿವೃದ್ಧಿ ಮಾಡುವವರಿಲ್ಲ ಎಂದರು

Exit mobile version