Home ಅಪರಾಧ ತಿಲಾರಿ ಡ್ಯಾಂನಲ್ಲಿ ತರಬೇತಿ ವೇಳೆ: ಇಬ್ಬರು ಕಮಾಂಡೋಗಳ ಸಾವು

ತಿಲಾರಿ ಡ್ಯಾಂನಲ್ಲಿ ತರಬೇತಿ ವೇಳೆ: ಇಬ್ಬರು ಕಮಾಂಡೋಗಳ ಸಾವು

0

ಬೆಳಗಾವಿ: ಮಹಾರಾಷ್ಟ್ರದ ತಿಲಾರಿ ಡ್ಯಾಂನಲ್ಲಿ ಬೋಟ್ ಮುಳುಗಿ ರಿವರ್ ಕ್ರಾಸಿಂಗ್ ತರಬೇತಿಗೆಂದು ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿಯ ಜೆ.ಎಲ್. ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನದ ವಿಜಯಕುಮಾರ ದಿನವಾಲ್(೨೮) ಹಾಗೂ ಪಶ್ಚಿಮ ಬಂಗಾಳದ ದಿವಾಕರ ರಾಯ್ (೨೬) ಮೃತಪಟ್ಟವರಾಗಿದ್ದಾರೆ. ಬೋಟ್‌ನಲ್ಲಿ ರಿವರ್ ಕ್ರಾಸಿಂಗ್ ಮಾಡುತ್ತಿದ್ದ ಆರು ಜನ ಸೈನಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಪಾರಾಗಿದ್ದಾರೆ.
ಬೆಳಗಾವಿಯ ಕಮಾಂಡೋ ತರಬೇತಿ ವಿಭಾಗದ ಇಬ್ಬರು ಸೈನಿಕರು ರಿವರ್ ಕ್ರಾಸಿಂಗ್ ತರಬೇತಿ ಪಡೆಯಲು ತಿಲ್ಲಾರಿ ಡ್ಯಾಂ ಹಿನ್ನೀರಿನ ಜಲಪ್ರದೇಶಕ್ಕೆ ತೆರಳಿದ್ದರು. ಹಿನ್ನೀರಿನ ಒಂದು ದಡದಿಂದ
ಇನ್ನೊಂದು ದಡಕ್ಕೆ ಬೋಟ್‌ನಲ್ಲಿ ಆರು ಜನ ಸೈನಿಕರು ತೆರಳಿದ್ದರು. ಇವರು ಜವಾನರಿಗೆ ರಿವರ್ ಕ್ರಾಸಿಂಗ್ ತರಬೇತಿ ಕೊಡುತ್ತಿದ್ದ ವೇಳೆ ಬೋಟ್ ಮುಳುಗಿ ಈ ದುರ್ಘಟನೆ ಸಂಭವಿಸಿದೆ. ಬೋಟ್‌ನಲ್ಲಿದ್ದ ಇತರರು ಪಾರಾಗಿದ್ದು ಇವರಿಬ್ಬರು ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Exit mobile version