Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ, ಪೈಪೋಟಿಯಲ್ಲಿ ಬಿಗ್ ಟ್ವಿಸ್ಟ್ – ಹಟ್ಟಿಹೊಳಿ ಕಣದಿಂದ ಹಿಂದಕ್ಕೆ

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ, ಪೈಪೋಟಿಯಲ್ಲಿ ಬಿಗ್ ಟ್ವಿಸ್ಟ್ – ಹಟ್ಟಿಹೊಳಿ ಕಣದಿಂದ ಹಿಂದಕ್ಕೆ

0

ಬೆಳಗಾವಿ: ಜಿಲ್ಲೆ ರಾಜಕಾರಣದಲ್ಲಿ ದೊಡ್ಡ ತಿರುವು ಮೂಡಿಸುವ ಬೆಳವಣಿಗೆಯೊಂದರಲ್ಲಿ, ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನಿರ್ದೇಶಕ ಸ್ಥಾನಕ್ಕೆ ಬಲವಾದ ಸಿದ್ಧತೆ ನಡೆಸಿದ್ದ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಸ್ವತಃ ವಿಡಿಯೋ ಮೂಲಕ ಘೋಷಣೆ ಮಾಡಿದ್ದು, “ನನ್ನ ಮನವೊಲಿಕೆಯ ಹಿನ್ನೆಲೆಯಲ್ಲಿ ಚನ್ನರಾಜ್ ಹಟ್ಟಿಹೊಳಿ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅರಸು-ಅಮರಸು ರಾಜಕಾರಣವಾಗಿ ಪರಿಣಮಿಸಿದ್ದ ಡಿಸಿಸಿ ಬ್ಯಾಂಕ್ ಚುನಾವಣೆ ಪೈಪೋಟಿಯಲ್ಲಿ ಹಟ್ಟಿಹೊಳಿ ಹಿಂಪಡೆಯುವುದರಿಂದ ಹೊಸ ಸಮೀಕರಣಗಳಿಗೆ ದಾರಿ ತೆರೆಯಲಿದೆ. ಕಳೆದ ನಾಲ್ಕೈದು ತಿಂಗಳಿಂದ ಖಾನಾಪುರ ಕ್ಷೇತ್ರದ ಆಧಾರವನ್ನು ಬಲಪಡಿಸಿಕೊಂಡಿದ್ದ ಚನ್ನರಾಜ್, ಪಿಕೆಪಿಎಸ್ ನಿರ್ದೇಶಕರ ಬೆಂಬಲ ಕೂಡಾ ಗಳಿಸಿದ್ದರು. ಈ ಹೊತ್ತಿಗೇ ಅವರು ಹಿಂದೆ ಸರಿಯುವುದು ಜಿಲ್ಲೆಯ ರಾಜಕೀಯದಲ್ಲಿ ದೊಡ್ಡ ಪ್ರಶ್ನಾರ್ಥಕವಾಗಿ ಪರಿಣಮಿಸಿದೆ.

“ಚುನಾವಣೆ ಹಿಂತೆಗೆದುಕೊಳ್ಳಲು ಇರುವ ನಿಜವಾದ ಕಾರಣಗಳ ಬಗ್ಗೆ ಮುಂದಿನ ದಿನಗಳಲ್ಲಿ ವಿವರ ಹಂಚಿಕೊಳ್ಳುತ್ತೇನೆ” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದರಿಂದ ಜಾರಕಿಹೊಳಿ–ಹಟ್ಟಿಹೊಳಿ ಬಾಂಧವ್ಯ, ಬ್ಯಾಂಕ್ ಚುನಾವಣೆಯ ಭವಿಷ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಶಕ್ತಿ ಸಾಮರ್ಥ್ಯದ ಲೆಕ್ಕಾಚಾರಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version