Home ಕ್ರೀಡೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದ ಭಾರತ ತಂಡಕ್ಕೆ ಜೈ ಹೋ

ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದ ಭಾರತ ತಂಡಕ್ಕೆ ಜೈ ಹೋ

0

ಹುಬ್ಬಳ್ಳಿಗರ ಅಭಿಮಾನದ ಹೊಳೆ, ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಟಿಸಿ ಸಂಭ್ರಮ
ಹುಬ್ಬಳ್ಳಿ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಕ್ರಿಕೆಟ್ ಅಭಿಮಾನಿಗಳು ಅಭಿಮಾನದ ಹೊಳೆಯನ್ನೇ ಹರಿಸಿದರು.
ಅತ್ತ ದುಬೈನಲ್ಲಿ ಭಾರತ ಕ್ರಿಕೆಟ್ ತಂಡ ಗೆಲುವಿನ ಕೇಕೆ ಹಾಕುತ್ತಲೇ ಇತ್ತ ಅಭಿಮಾನಿಗಳು ಜಯಘೋಷ ಮೊಳಗಿಸಿದರು. ನಗರ ಕಿತ್ತೂರು ರಾಣಿ ಚನಮ್ಮ ವೃತ್ತ, ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಾರತ ಬಾವುಟ ಹಿಡಿದು ಜಯಘೋಷ ಮೊಳಗಿಸಿದರು. ಜೈ ಹೋ ಭಾರತ ಹಾಡು ಹಾಡಿ ಅಭಿಮಾನ ಮೆರೆದರು.
ಅಂತಿಮ ಪಂದ್ಯದ ರೋಚಕ ಕ್ಷಣಗಳು, ಗೆಲುವಿನ ದಡವನ್ನು ಭಾರತ ಸೇರಿದ್ದನ್ನು ಪರಸ್ಪರ ಹಂಚಿಕೊAಡ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ದೈತ್ಯ ಪ್ರತಿಭೆಗಳ ಅಗಾಧ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.
ಟೀಮ್ ಇಂಡಿಯಾ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶಿಸಿ ನಮಗೆ ಹೆಮ್ಮೆ ತರಿಸಿದೆ ಎಂದರು.

Exit mobile version